ಸಂಜು ಮತ್ತು ಗೀತಾ

ಸಂಜು ವೆಡ್ಸ್ ಗೀತಾ

ಸಂಜು ಮತ್ತು ಗೀತಾ ಸೇರಬೇಕು ಅಂತಾ

ಬರೆದಾಗಿದೆ ಇಂದು ಬ್ರಹ್ಮನು || ಪ ||

ನನ್ನ ಜೀವಕಿಂತ ನೀನೇ ನನ್ನ ಸ್ವಂತ

ಇರುವಾಗ ನಾನು ಚಿಂತೆ ಏನು

ನಿನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು

ನನ್ನ ಎಲ್ಲ ಖುಷಿಯನ್ನು ಕೊಡುವೆ ನಿನ್ನ ವಶಕಿನ್ನು

ಮಳೆಯಾ ಹನಿ ಉರುಳೋ ದನಿ ಥರವೇ

ನಗಬಾರದೆ ನಗಬಾರದೆ ನನ್ನೊಲವೇ || ೧ ||

ಆ ಕಣ್ಣಿಗೊಂದು ಈ ಕಣ್ಣಿಗೊಂದು

ಸ್ವರ್ಗಾನ ತಂದು ಕೊಡಲೇನು ಇಂದು

ಏನಾಗಲಿ ನನ ಸಂಗಾತಿ ನೀ

ನಿನ ಈ ಕಣ್ಣಲೀ ಇದೆ ಕೊನೆಯ ಹನಿ

ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ

ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ನಿನ್ನ

ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ

ಮಳೆಯಾ ಹನಿ ಉರುಳೋ ದನಿ ಥರವೇ

ನಗಬಾರದೆ ನಗಬಾರದೆ ನನ್ನೊಲವೇ || ೨ ||

ಕಂಡಿಲ್ಲ ಯಾರು ಆ ದೇವರನ್ನು

ಇರಬಹುದು ಏನು ನಿನ್ನಂತೆ ಅವನು

ಗೆಳೆಯಾ ಎಂದರೆ ಅದಕೂ ಹತ್ತಿರ

ಇನಿಯಾ ಎಂದರೆ ಅದಕೂ ಇತ್ತರ

ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು

ಕರಗಿ ಹೋಗಲೇನು ನಿನ್ನ ಕರಗಳಲ್ಲಿ ನಾನು

ಯುಗದಾಚೆಗೂ ಜಗದಾಚೆಗೂ ಜೊತೆಗೆ ಸಾಗುವೆ

ಕಡಲೆಲ್ಲವ ಅಲೆಸುತ್ತುವ ತರವೇ

ನಿನ ಸೇರುವೆ ನಿನ ಸೇರುವೆ ನನ್ನೊಲವೆ || ೩ ||

ಸಂಜು ವೆಡ್ಸ್ ಗೀತಾ

ಚಿತ್ರ ನೋಡಿ